Sunday, July 10, 2011

ಗೀತ- ಸಂಗೀತ ...

               ಎಲ್ಲೋ ಯಾವತ್ತೋ ಬರೆದ ಒಂದು ಕವಿತೆ ಮೊನ್ನೆ ಹೀಗೇ "ಒತ್ತರೆ" ಕೆಲಸ ಮಾಡುತ್ತಿದ್ದಾಗ ಸಿಕ್ತು . ಹಳೆಯ ನೆನಪುಗಳೆಲ್ಲ ನನ್ನೆದೆಯ ಕಿರುತೆರೆಯಲ್ಲಿ ಧಾರಾವಾಹಿಯ ಥರ ಹಾದುಹೋದಾಗ ಮುಖದಲ್ಲಿ ಚಿಕ್ಕ ಮುಗುಳ್ನಗೆ. ಪುಣ್ಯಕ್ಕೆ ಹತ್ತಿರ ಯಾರಿರಲಿಲ್ಲ . ಥೂ... ಏನಿದು? ಒಳ್ಳೇ " ಸವಿ ಸವಿ ನೆನಪು , ಸಾವಿರ ನೆನಪು" ಹಾಡಿನ ಥರ ಆಯ್ತಲ್ಲ  ಅಂದುಕೊಂಡೆ .
              ಏನೇ ಇದ್ದರೂ ಬ್ಲಾಗ್ಗೆ ಹಾಕಲು ತೊಂದರೆ ಇಲ್ಲ ಅಂದುಕೊಳ್ತೇನೆ.. ಏನಂತೀರಿ? 

ಗೀತ- ಸಂಗೀತ 

ಮುಗುದೆಯೊಡಲ ಪ್ರೇಮದಂತೆ
ಹುದುಗಿತೆನ್ನ ಗೀತವು,
ಅವಿತು ಸ್ವಾತಿಮುತ್ತಿನಂತೆ
ಚಿಪ್ಪಿನೊಳಗೆ ಕಾವ್ಯವು.

ಮನದ ಭಾವ ತಿಳಿಸಲೆಂತು?
ಶಬ್ದದೊಡಲ ಬಗೆಯಲೆಂತು?
ಅರಿಯೆ... ನಾನು ವಿಹ್ವಲ!!!
ತೋರು ತಾಯೇ, ಕೌಶಲ.

ಪ್ರಕೃತಿ ಮಾತೆ ಪೊರೆಯೆ, ತನ್ನ
ಕೋಟಿ ಕೋಟಿ  ಜೀವವ.
ತೆರೆಯಿತೆನ್ನ ಮನದ ಕದವ
ಪಕ್ಷಿ ಕಂಠ ಕಲರವ.

ಕುಹೂ ಕುಹೂ ಕೋಗಿಲೆಗೂ
ಮಾಮರದ ನಂಟೇ?
ಜೀವ ಭಾವಗಳ ಜೊತೆಗೂ
ಸುಖಸಂಬಂಧದ ಗಂಟೇ?

ಕಾಲಚಕ್ರ ತಿರುಗಲಿತ್ತ;
ಮನಕೆ ಕವಿದ ತೆರೆಯು ಸರಿದು
ಭ್ರಮೆಯ ಬದುಕು ವ್ಯರ್ಥವೆಂದು
ಹೊಳೆಯೆ, ಚಿತ್ತ ಸಾರ್ಥಕ...

ಮನದಂಗಳದಿ ಮಲಗಿದೆನ್ನ
ಕಾವ್ಯಭಾವ ಮಂಜುಳದನಿಯ
ಬದಿದೆಬ್ಬಿಸಲೀ ಸ್ಪೂರ್ತಿಜಾಲ
ಹೊರಸೂಸಲಿ ಭಕ್ತಿಭಾವ.

ಮನದ ಮಾತು ಹೊರಹೊಮ್ಮಿ
ಕವನ ರೂಪ ತಾಳಿತು
ಗೀತ - ಸಂಗೀತವಾಗಿ ಜಗದ
ಒಡಲ ಮೀರಿ ಹರಡಿತು

ಮನದ ಕಡಲೊಡಲೊಳಗಿಂದ
ಭೋರ್ಗರೆಯಿತು ಭಾವನೆ
ಪದಗಳದೇ ಚಿಲುಮೆಯಿಂದ
ಚಿಮ್ಮಿತು ಗೀತಬುಗ್ಗೆಯು

ಕಪ್ಪಿಟ್ಟ ಬಾನಿಂದ ಮರೆಯಾದ ನೇಸರ
ಮೂಡಿದ ಮನ:ಪಟಲದಲಿ
ತಿಳಿಯಾಯಿತು ಹೃದಯ , ಮಿಂಚು ಹರಿದು
ಹದದಿ ಬೆರೆತು ರಾಗದ ಜೊತೆ
ಮೂಡಿತು,
ಗೀತ - ಸಂಗೀತವು.


ಈ ವಾಕ್ಯವನ್ನು ಓದುತ್ತಿದ್ದೀರಿ ಅಂದ ಮೇಲೆ ಮೇಲಿನ ಕವಿತೆಯನ್ನೂ ಓದಿದ್ದೀರಿ ಅಂದುಕೊಳ್ಳಬಹುದಲ್ವಾ  ?
ಹಾಗಿದ್ದರೆ ನಿಮ್ಮ ಅಭಿಪ್ರಾಯಗಳನ್ನೂ ಕೆಳಗಿರುವ "ಕಾಮೆಂಟ್ ಬಾಕ್ಸ್ "ಲ್ಲಿ ಬರೆದರೆ ತುಂಬಾ ಸಂತೋಷ... 

ಧನ್ಯವಾದ,
ಶರಣ್ ...

7 comments:

  1. Mr.photographer,i wasnt knowing that u will write poems too...the above poem is absolutely like your photoshoots!!!its wonderful!!! keep blogging :)-Avinash K R here

    ReplyDelete
  2. superb sharana,so u write poems too,keep up the good work

    ReplyDelete
  3. Sure. Thanks. But Please let me know who you are. :)

    ReplyDelete
  4. Nice one. I had seen the hard copy of this poem at our home I guess.

    Good work, keep it up!

    ReplyDelete
  5. nice one sharan..:) keep it up..:)

    ReplyDelete
  6. very nice poem sharan. liked it.. please keep writing..:):)

    ReplyDelete